ನಾಡಿ 2 -
	ಅಥರ್ವವೇದದಲ್ಲಿ ಮತ್ತು ಉಪನಿಷತ್ತುಗಳಲ್ಲಿ ನಾಡೀ ಶಬ್ದ ಹೃದಯದಿಂದ ದೇಹಕ್ಕೆ ಇತರ ಭಾಗಗಳಿಗೆ ಅಥವಾ ಇತರ ಭಾಗಗಳಿಗೆ ಅಥವಾ ಇತರ ಭಾಗಗಳಿಂದ ಹೃದಯಕ್ಕೆ ರಕ್ತವನ್ನು ಸಾಗಿಸುವ ರಕ್ತನಾಳಗಳನ್ನು ಸೂಚಿಸುತ್ತದೆ. ಹಿತಾ ಎಂಬ 72,000 ನಾಡಿಗಳು ಹೃದಯದಿಂದ ಎಲ್ಲಾ ಕಡೆಗೂ ಹರಡಿವೆ. ಜೀವಾತ್ಮ ಗಾಢ ನಿದ್ರೆಯಲ್ಲಿರುವಾಗ ಈ ನಾಡಿಗಳ ಮೂಲಕ ಹೃದಯವನ್ನು ಸೇರಿರುತ್ತಾನೆ. ಸುಷುಮ್ನಾ ಎಂಬ ನಾಡಿಯ ಮೂಲಕ ಶರೀರವನ್ನು ಬಿಡುವಾತ ಅಮೃತತ್ವವನ್ನು ಹೊಂದುತ್ತಾನೆ. ಶಾಕ್ತ ತಂತ್ರಗಳ ಪ್ರಕಾರ ನಾಡಿಗಳೆಂದರೆ ಪ್ರಾಣವನ್ನು ಒಯ್ಯುವ ಸೂಕ್ಷ್ಮವಾದ ಅಭೌತನಾಳಗಳು. ಇವುಗಳಿಗೆ ಯೋಗನಾಡಿಗಳೆಂದು ಹೆಸರು. ಇವುಗಳಲ್ಲಿ ಇಡಾ ಪಿಂಗಳ ಸುಷುಮ್ನಾ ಎಂಬಿವು ಅತ್ಯಂತ ಮುಖ್ಯವಾದುವು.				
	(ಎಸ್.ಡಬ್ಲೂ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ